Posts

Showing posts from July, 2021

ವಿರಹ ವೇದನ

ಹೇ ಮನವೇ ತಾಳು, ಗಲಿಬಿಲಿಗೊಳ್ಳದಿರು, ಸುಟ್ಟು ಹೊಗೆಯಾಡುತ್ತಿದೆ ನಿನ್ನ ಎದೆಯಾಳದಲ್ಲಿ ಅವಳ ಮಾತು - ಮುತ್ತು , ಜೋತೆಗಿಲ್ಲವೆಂದು , ಪ್ರೀತಿಸಿದ ಜೀವ ಜೋತೆ ಇಲ್ಲದಿರಬಹುದು ಆದರೆ ಅವಳ ಪ್ರೀತಿ ನಿನ್ನ ಹೃದಯ ಬಡಿತದಲ್ಲಿದೆ, ನಿನ್ನ ಸುತ್ತ ಮುತ್ತಲಲ್ಲೂ ಪ್ರೀತಿ ಅನಂತವಾಗಿದೆ , ಕಿವಿಗೊಟ್ಟು,ಕಣ್ಣು ತೆರೆದು , ಕೈ ಚಾಚಿ ಬಿಗಿದಪ್ಪಿಕೊ ಆ ಪ್ರೀತಿಯ ಆಗ ಸಮೃದ್ಧ ಜೀವನವ ನಿನ್ನದಾಗುವುದು.

ಕಾಲಚಕ್ರದ ನಡೆ

ಪ್ರೀತಿ ಮಳೆಗಾಲದಲ್ಲಿ ಯ ಭೂಮಿಯಂತೆ ಹಸಿರಾಗಿ ಉಸಿರಾಗಿ,ಫಲಪುಷ್ಪವ ನೀಡುವಂತದ್ದು. ವಿರಹ ಬೇಸಿಗೆಯಂತೆ ಹಸಿರೆಲ್ಲ ಒಣಗಿ , ಆಹಾಕಾರ ತಾಂಡವವಾಡುವಂತದ್ದು. ಇಲ್ಲಿ ಪ್ರೀತಿ, ವಿರಹ, ದ್ವೇಷಗಳೆಲ್ಲ ಋತುಮಾನಗಳಂತೆ ಅಶಾಶ್ವತ.ಎಲ್ಲ ಕಾಲಚಕ್ರದ ನಡೆ

ಒಂದು ದಿನದ ಜೀವನ

ನಾವು ಚಿಕ್ಕಂದಿನಿಂದ ಇಂದಿನ ವರೆಗೆ ಕನಸು ಕಾಣುತ್ತಲೆ ಬಂದಿದ್ದವಿ , ಆ ಕನಸುಗಳು ಸಾಕಾರವಾಗದಿದ್ದಾಗ ಹಿಂದೆ ನಿರಾಶೆಗೊಂಡಿರುವೆವು, ನಮ್ಮ ಆಸೆ ಕನಸುಗಳೆಲ್ಲ ಕೊಚ್ಚಿ ಹೋದ ನಂತರ ನಾವು ಹೆಚ್ಚು ಕಲಿತುಕೊಳ್ಳುತ್ತಾ, ಜೀವನದಲ್ಲಿ ಎಲ್ಲದರ ಮೇಲೆಯೂ ಪೂರ್ವಾಗ್ರಹ ಗಳನ್ನು ಕಟ್ಟಿಕೊಂಡು ಸಮಾಧಾನ ಪಟ್ಟುಕೊಳ್ಳಲು ಮಾರ್ಗ ಕಂಡುಕೊಳ್ಳುವೆವು. ಈ ಪೂರ್ವಾಗ್ರಹದ ಬಗ್ಗೆ ಉದಾಹರಣೆ ಕೊಡುವುದಾದರೆ (1) ನಾವು ಈ ಹಿಂದೆ ಒಬ್ಬರನ್ನು ಅತಿಯಾಗಿ ಹೆಚ್ಚಿಕೊಂಡು, ಅವರೊಡನೆ ಮನಸ್ತಾಪ ಮಾಡಿಕೊಂಡು ಬಹು ನೋವಿನಿಂದ ಅವರನ್ನು ಕಳೆದುಕೊಂಡ ನಂತರದ ದಿನಗಳಲ್ಲಿ ಯಾರನ್ನು ಅತಿಯಾಗಿ ಹೆಚ್ಚಿಕೊಳ್ಳಬಾರದು, ಹಚ್ಚಿಕೊಂಡರೆ ನೋವೆ ಶಾಶ್ವತವೆಂದು ಯಾರನ್ನು ಮಾತಾಡಿಸದೆ , ಪ್ರೀತಿ ಸದೆ ನಮಗೆ ನಾವೇ ಗೋಡೆ ಕಟ್ಟಿಕೊಳ್ಳುತ್ತೆವೆ. ಹಿಂದೆ ನಮಗೆ ಯಾರೋ ಒಬ್ಬ ನಂಬಿಕೆ ಕಳೆದುಕೊಳ್ಳುವಂತೆ ಮಾಡಿದ್ದರೆ ಈಗ ಯಾರನ್ನು ನಂಬದಿರುವುದು ಅಥವಾ ಅವರ ಜೊತೆ ಪ್ರೀತಿ ಆಧರರಿಂದ ನಡೆದುಕೊಳ್ಳದೆ ನಾಟಕೀಯ ಸ್ನೆಹ ತೊರಿಸುವುದು . ಇವೆಲ್ಲ ನಮ್ಮ ಪೂರ್ವಾಗ್ರಹದ ಪರಿಣಾಮಗಳು .ಹಾಗಾದರೆ ನಮ್ಮ ಬದಕು ಹೇಗಿರಬೇಕು. ಚಿಂತನೆ ಹೇಗಿರಬೇಕು? ನೋಡೋಣ.. (1)ನಾವು ಜೀವನವನ್ನ ಒಂದು ದಿನಕ್ಕಾಗಿ ಬಾಳ ಬೇಕು .ನಮಗೆ ಪ್ರೀತಿ ಸು ವವರು ಸಿಕ್ಕಾಗ ಮನಸ್ಫೂರ್ತಿಯಾಗಿ ಪ್ರೀತಿಸಬೇಕು, ಅವರನ್ನ ಕಳೆದುಕೊಳ್ಳುವ ಬಯವಾಗಲಿ ಅಥವಾ ನಿರೀಕ್ಷೆಗಳ ಭಾರ ಬರಬಾರದು.ನಿತ್ಯ ಜೀವನದಲ್ಲಿ ನಾಳೆಗಾಗಿ ನಿರೀಕ್ಷೆ, ಆಸೆ, ಕನಸು ಇಟ್ಟುಕ