ಒಂದು ದಿನದ ಜೀವನ

ನಾವು ಚಿಕ್ಕಂದಿನಿಂದ ಇಂದಿನ ವರೆಗೆ ಕನಸು ಕಾಣುತ್ತಲೆ ಬಂದಿದ್ದವಿ , ಆ ಕನಸುಗಳು ಸಾಕಾರವಾಗದಿದ್ದಾಗ ಹಿಂದೆ ನಿರಾಶೆಗೊಂಡಿರುವೆವು, ನಮ್ಮ ಆಸೆ ಕನಸುಗಳೆಲ್ಲ ಕೊಚ್ಚಿ ಹೋದ ನಂತರ ನಾವು ಹೆಚ್ಚು ಕಲಿತುಕೊಳ್ಳುತ್ತಾ, ಜೀವನದಲ್ಲಿ ಎಲ್ಲದರ ಮೇಲೆಯೂ ಪೂರ್ವಾಗ್ರಹ ಗಳನ್ನು ಕಟ್ಟಿಕೊಂಡು ಸಮಾಧಾನ ಪಟ್ಟುಕೊಳ್ಳಲು ಮಾರ್ಗ ಕಂಡುಕೊಳ್ಳುವೆವು. ಈ ಪೂರ್ವಾಗ್ರಹದ ಬಗ್ಗೆ ಉದಾಹರಣೆ ಕೊಡುವುದಾದರೆ (1) ನಾವು ಈ ಹಿಂದೆ ಒಬ್ಬರನ್ನು ಅತಿಯಾಗಿ ಹೆಚ್ಚಿಕೊಂಡು, ಅವರೊಡನೆ ಮನಸ್ತಾಪ ಮಾಡಿಕೊಂಡು ಬಹು ನೋವಿನಿಂದ ಅವರನ್ನು ಕಳೆದುಕೊಂಡ ನಂತರದ ದಿನಗಳಲ್ಲಿ ಯಾರನ್ನು ಅತಿಯಾಗಿ ಹೆಚ್ಚಿಕೊಳ್ಳಬಾರದು, ಹಚ್ಚಿಕೊಂಡರೆ ನೋವೆ ಶಾಶ್ವತವೆಂದು ಯಾರನ್ನು ಮಾತಾಡಿಸದೆ , ಪ್ರೀತಿ ಸದೆ ನಮಗೆ ನಾವೇ ಗೋಡೆ ಕಟ್ಟಿಕೊಳ್ಳುತ್ತೆವೆ. ಹಿಂದೆ ನಮಗೆ ಯಾರೋ ಒಬ್ಬ ನಂಬಿಕೆ ಕಳೆದುಕೊಳ್ಳುವಂತೆ ಮಾಡಿದ್ದರೆ ಈಗ ಯಾರನ್ನು ನಂಬದಿರುವುದು ಅಥವಾ ಅವರ ಜೊತೆ ಪ್ರೀತಿ ಆಧರರಿಂದ ನಡೆದುಕೊಳ್ಳದೆ ನಾಟಕೀಯ ಸ್ನೆಹ ತೊರಿಸುವುದು . ಇವೆಲ್ಲ ನಮ್ಮ ಪೂರ್ವಾಗ್ರಹದ ಪರಿಣಾಮಗಳು .ಹಾಗಾದರೆ ನಮ್ಮ ಬದಕು ಹೇಗಿರಬೇಕು. ಚಿಂತನೆ ಹೇಗಿರಬೇಕು? ನೋಡೋಣ.. (1)ನಾವು ಜೀವನವನ್ನ ಒಂದು ದಿನಕ್ಕಾಗಿ ಬಾಳ ಬೇಕು .ನಮಗೆ ಪ್ರೀತಿ ಸು ವವರು ಸಿಕ್ಕಾಗ ಮನಸ್ಫೂರ್ತಿಯಾಗಿ ಪ್ರೀತಿಸಬೇಕು, ಅವರನ್ನ ಕಳೆದುಕೊಳ್ಳುವ ಬಯವಾಗಲಿ ಅಥವಾ ನಿರೀಕ್ಷೆಗಳ ಭಾರ ಬರಬಾರದು.ನಿತ್ಯ ಜೀವನದಲ್ಲಿ ನಾಳೆಗಾಗಿ ನಿರೀಕ್ಷೆ, ಆಸೆ, ಕನಸು ಇಟ್ಟುಕೊಳ್ಳದೆ ಈ ದಿನ ಆ ಆಸೆ, ಕನಸಂತೆ ಬದುಕು ಬೇಕು, ನಾಳೆಗೆ ಏನನ್ನು ಇಟ್ಟುಕೊಳ್ಳದೆ ಇಂದಿನ ದಿನವೇ ಎಲ್ಲನ್ನ ಮಾಡುತ್ತಾ ಮುಗಿಸುತ್ತಿರಬೇಕು.ನಾವು ಬಾಳುವುದು ನಾಳಿಯಲ್ಲಿ ಅಲ್ಲ , ಇಂದಿನ ದಿನ. ಇಂದಿನ ದಿನ ಒಬ್ಬರಿಗೆ ಒಳಿತ ಬಯಸಿ ಒಳಿತು ಮಾಡೊಣ , ಎಂದೂ ನಾವು ಏನೊ ಆಗುತ್ತೆವೆ ಎಂಬೂ ವುದ ಬಿಟ್ದು ಇಂದು ತುಸು ದುಡಿಯೋಣ,ನಾಳೆಗೆ ಎನನ್ನು ಬೀಡ ದೆ ಇರೋಣ, ನಮ್ಮಿಂದ ತಪ್ಪಾದಾಗ ಬೇರೆಯವರ ಕ್ಷಮೆ ಇಂದೆ ಕಳೊಣ. ಬೇರೆಯವರು ತಪ್ಪು ಮಾಡಿದಾಗ ಇಂದೆ ಕ್ಷಮಿಸೋಣ ನಾಳೆಯ ದಿನಕ್ಕೆ ಭಾರವ ಹೊತ್ತುಕೊಳ್ಳದೆ ಇಂದೆ ಆ ಭಾರವನ್ನು ಹೊರೂಣ. ಯಾವುದನ್ನೇ ಆಗಲಿ ಇಂದೆ ಪಡೆದು ಕೊಳ್ಳೋಣ, ಇಂದು ಪಡೆದುಕೊಳ್ಳಲು ಸಾಧ್ಯವಿರು ವಂತವನ್ನೆ ಬಯಸೋಣ ಅತೀ ಆಸೆಯಿಂದ ಬರುವ ಜಿಗುಪ್ಸೆ, ನೋವುಗಳನ್ನ ತಡೆಯೋಣ

Comments

Popular posts from this blog

Thanks to The Lord Jesus

My transformation of life through God and his only son Jesus and the Holy spirit

Miracle doing God and his only son Lord Jesus and Holy spirit