ಈ ಬದುಕು ಇದ್ದರೆಷ್ಟು, ಬಿಟ್ಟರೆಷ್ಟು .

ಹಡೆದ ತಾಯಿಯೇ ಕುತ್ತಿಗೆ ಹಿಸುಕಿ ಸಾಯುವಾಗ ಯಾವ ಮಗು ತಾನೆ ಬದುಕೀತು. ಅಗ್ನಿಸಾಕ್ಷಿಯಾಗಿ ಕೈಹಿಡಿದವನೇ ಒದ್ದು ಹೊರಹಾಕಿ ಬೇರೆಯವರ ಜೋತೆ ಹಾದರ ಮಾಡುವಾಗ ಯಾವ ಹೆಂಡತಿ ಬದುಕಿ ಬಾಳ ಬಲ್ಲಳು. ಒಡಹುಟ್ಟಿದ ಸಹೋದರನೆ ನಾಯಿ ಎಂದು ಹೀಗಳಿಯುವಾಗ ಯಾವ ಅಕ್ಕ-ತಂಗಿ ಜೀವನ ನಡೆಸುವರು, ಒಡಹುಟ್ಟಿದ ತಂಗಿಯು ಮಾತು ಕೆಳದೆ ಅಹಂಕಾರ ತೋರಿದರೆ ಯಾವ ಅಕ್ಕ ಖುಷಿ ಇಂದ ಇರುವಳು. ತಂದೆಯಾದವನು ತಂದು ಹಾಕದೆ ಅಲೆದಾಡುವಾಗ ಯಾವ ಸಂಸಾರ ಸುಖದಿಂದ ಇದ್ದಿತು. ಜೀವದ ಗೆಳಯ ಕಷ್ಟಕ್ಕೆ ಆಗದೆ ತನ್ನ ಬೆಳೆ ಬೆಯಸಿಕೊ೦ಡು ಹೋಗುವಾಗ ಯಾವನು ಇನ್ನೂಬರ ಎದುರು ಸಹಾಯಕ್ಕಾಗಿ ಕೈ ಚಾಚುವನು. ಹೀಗಿರುವ ಮನುಷ್ಯ ಯಾರಿಗಾಗಿ ಉಸಿರಾಡಬೇಕು? ಯಾವ ಸುಖಕ್ಕಾಗಿ ಹೊಟ್ಟೆ ತುಂಬಿಸಿಕೊಳ್ಳಬೇಕು. ಇಂತಹ ಬದುಕು ಇದ್ದರೆಷ್ಟು, ಬಿಟ್ಟರೆಷ್ಟು .

Comments

Popular posts from this blog

Thanks to The Lord Jesus

ಅಮ್ಮ

ಜನರು ತಮ್ಮ ಜೀವನದಲ್ಲಿ ಬಯಸಿದ್ದನ್ನು ಏಕೆ ಪಡೆಯುತ್ತಿದ್ದಾರೆ?